ಡಾಪ್ಲರೈಟ್
ನೈಸರ್ಗಿಕವಾಗಿ ಸಿಗುವ ಸ್ನಿಗ್ಧವಾಗಿರುವ ಕಾರ್ಬನಿಕ ಆಮ್ಲ. ಸಾಮಾನ್ಯವಾಗಿ ಕೆಳದರ್ಜೆಯ ಕಲ್ಲಿದ್ದಲಿನಿಂದ ಹುಟ್ಟುತ್ತದೆ. ಇದು ಪ್ರತ್ಯಾಮ್ಲದಲ್ಲಿ ವಿಲೀನವಾಗುತ್ತದೆ. ಸುಣ್ಣ, ಕಬ್ಬಿಣ ಅಥವಾ ಮೆಗ್ನೀಸಿಯಮ್ ಧಾತುಗಳು ಇದರಲ್ಲಿ ಕಾರ್ಬನಿಕ ವಸ್ತುವಿನಿಂದ ಬಂಧಿಸಲ್ಪಟ್ಟಿರುತ್ತವೆ ಮತ್ತು 5%ರಷ್ಟು ಆಕ್ಸೈಡಿನ ಅಂಶವಿರುತ್ತದೆ. ಸಾಮಾನ್ಯವಾಗಿ ಆಕ್ಸೈಡಿನ ಅಂಶವನ್ನುಳಿದು ಡಾಪ್ಲರೈಟಿನಲ್ಲಿ 55.5% ಇಂಗಾಲ, 6.5% ಜಲಜನಕ, 36% ಆಮ್ಲಜನಕ ಮತ್ತು 2% ಸಾರಜನಕ ಇರುತ್ತವೆ. ಡಾಪ್ಲರೈಟಿನ ಸಂಯೋಜನೆ ಸಾಮಾನ್ಯವಾಗಿ ಅದರ ಜನಕ ಕಲ್ಲಿದ್ದಲಿನ ಸಂಯೋಜನೆಯಂತೆ ಇರುವುದು. ನೀರನ್ನು ಕಳೆದುಕೊಂಡ ಬಳಿಕ ಡಾಪ್ಲರೈಟ್ ಕಪ್ಪುಬಣ್ಣದ ಪೆಡಸುತನವುಳ್ಳ ವಸ್ತುವಾಗಿ ಮಾರ್ಪಡುತ್ತದೆ.
(ಎಚ್.ಸಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ